ಪ್ರಕಾಶನ : ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ
ಸದರಿ ಕಾದಂಬರಿಯನ್ನು ಲೇಖಕಿ 2005ರಲ್ಲಿ ಬರೆದಿದ್ದು ಅವರ ನಿಧನಾ ನಂತರ ‘ರಾಗ ಸಂಗಮ’ ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು. 18 ಕಂತುಗಳಲ್ಲಿ ಧಾರವಾಹಿಯಾಗಿ ಪ್ರಕಟವಾದ ಈ ಕಾದಂಬರಿ ತನ್ನ ಸರಳ ಸುಂದರ ನಿರೂಪಣೆಯಿಂದ ಅಪಾರ ವಾಚಕರ ಮೆಚ್ಚುಗೆ ಪಡೆದಿತ್ತು.
ಕಾದಂಬರಿ ನಾಯಕಿ ವಿಶಾಲಾಕ್ಷಿ ಬಡ ಕುಟುಂಬವೊಂದರಲ್ಲಿ ಹುಟ್ಟಿದ ಎರಡನೇ ಮಗಳು. ಎರಡನೇ ಮಗುವೂ ಹೆಣ್ಣು ಎನ್ನುವ ಮಾತಾಪಿತೃಗಳ ತಿರಸ್ಕಾರ. ಜೊತೆಗೆ ಉದ್ಯೋಗವೂ ಇಲ್ಲದ ಆ ತರುಣಿ ಮನೆಯವರಿಗೆ ಭಾರವಾಗುತ್ತಾಳೆ. ಮುಂದಿನ ಜೀವನದಲ್ಲಿ ಸವಾಲುಗಳನ್ನು ಹೇಗೆ ಎದುರಿಸಿದಳು ಎನ್ನುವುದೇ ಕಾದಂಬರಿಯ ಕಥಾವಸ್ತು.










Be the first to review “ಮಾಣಿಕ್ಯದ ಬಂಧನ / Manikya Bandana”