ಪ್ರಕಾಶನ : ಹೇಮಂತ ಸಾಹಿತ್ಯ
ಭಾರತದ ಈಶಾನ್ಯ ನಾಡಿನ ಮಣಿಪುರ ರಾಜ್ಯದ ಕೋಮ್ ಎಂಬ ಬುಡಗಟ್ಟು ಜನಾಂಗದಲ್ಲಿ ಜನ್ಮತಳೆದ ಮೇರಿ ಕೋಮ್ ಮಹಿಳಾ ಬಾಕ್ಸಿಂಗ್ ಕ್ರೀಡೆಯಲ್ಲಿ ಭಾರತದ ಕ್ರೀಡಾ ಘನತೆಯನ್ನು ಶಿಖರಕ್ಕೊಯ್ದ ಆಟಗಾರ್ತಿ. 2012ರ ಸಮ್ಮರ್ ಒಲಂಪಿಕ್ಸ್‌ನಲ್ಲಿ ಬಾಕ್ಸರ್ ಆಗಿ ಪ್ರವೇಶ ಪಡೆದು ಕಂಚಿನ ಪದಕ ಸ್ವೀಕರಿಸಿ 2014ರಲ್ಲಿ ಏಷಿಯನ್ ಗೇಂನಲ್ಲಿ ಸುವರ್ಣ ಪದಕವನ್ನು ಪಡೆದು ಆರು ವರ್ಲ್ಡ್ ಮಹಿಳಾ ಚಾಂಪಿಯನ್‌ಷಿಪ್‌ಗಳಲ್ಲಿಯೂ ಈಕೆಯೊಬ್ಬಳೇ ಪ್ರತಿಯೊಂದು ಕ್ರೀಡೆಯಲ್ಲಿಯೂ ಒಂದೊಂದು ಪದಕವನ್ನು ಪಡೆದ ಮಹಿಳಾ ಆಟಗಾರ್ತಿ. 2002, 2003, 2004, 2006ರಲ್ಲಿ ಕ್ರಮವಾಗಿ ಟರ್ಕಿ, ಹಂಗೇರಿ, ನಾರ್ವೆ, ಟೈವಾನ್, ಡೆನ್ಮಾರ್ಕ್, ರಷ್ಯಾ, ಕಝಕಿಸ್ತಾನಗಳಲ್ಲಿ ಭಾಗವಹಿಸಿ ಅನೇಕ ಸ್ವರ್ಣಪದಕಗಳನ್ನೂ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.











Be the first to review “ಮೇರಿ ಕೋಮ್ / Meri Kom”