ಪ್ರಕಾಶನ : ಹೇಮಂತ ಸಾಹಿತ್ಯ
‘ಕಾಲಚಕ್ರ’ ಕಾದಂಬರಿಯಲ್ಲಿ ನಾನು ವ್ಯಕ್ತಿವಾದ ಮತ್ತು ಅದರ ಅನುವರ್ತಿಯಾದ ಗೃಹವ್ಯವಸ್ಥೆಯನ್ನು ಸಾಪೇಕ್ಷ ಸ್ವರೂಪದಲ್ಲಿ ನೋಡಲು ಪ್ರಯತ್ನಿಸಿದ್ದೇನೆ. ನಾಗೇಂದ್ರ ರಂಗನಾಯಕಿಯರ ವಿಲೋಭಪೂರಿತ ವ್ಯಕ್ತಿವಾದ ಮಹಾಬಲರಾಯನ ಸಂಸಾರದ ಪತನಕ್ಕೆ ಕಾರಣವಾದುದಲ್ಲದೆ, ಅದಕ್ಕೆ ಸಂಬಂಧಪಟ್ಟ ನಾಲ್ಕಾರು ಮನೆಗಳ ಅಪಯಶಸ್ಸಿಗೂ ಕಾರಣವಾಯಿತೆಂದು ತೋರಿಸಲು ಯತ್ನಿಸಿದ್ದೇನೆ. ನಾಗೇಂದ್ರ, ರಂಗನಾಯಕಿಯರ ನಡತೆ ನೀತಿಗೆ ಸಂಬಂಧಿಸಿದಂತೆ ಸಮಾಜದ ಸುವ್ಯವಸ್ಥೆಗೂ ಸಂಬಂಧಪಟ್ಟುದಾಗಿದೆ. ಅವರ ದುರಂತ ಜೀವನವನ್ನು ನಾವು ಕೇವಲ ವ್ಯಕ್ತಿಪತನವೆಂದು ಭಾವಿಸುವುದಿಲ್ಲ; ಸಾಮಾಜಿಕ ಶೈಥಿಲ್ಯದ ಸಂಕೇತವೆಂದೂ ಭಾವಿಸುತ್ತೇವೆ.











Be the first to review “ಕಾಲಚಕ್ರ , ದೇವಪ್ರಿಯ ಮತ್ತು ಜೀವನಯಾತ್ರೆ / Kalachakra,Devapriya Mattu Jeevanayatre”