ಪ್ರಕಾಶನ : ಹೇಮಂತ ಸಾಹಿತ್ಯ
ಕೃಷ್ಣರಾಯರು ಕನ್ನಡ ಕಥನ ಸಾಹಿತ್ಯಕ್ಕೊಂದು ಲಲಿತ ಶೈಲಿಯನ್ನು ರೂಪಿಸಿದರು. ಸಾಮಾಜಿಕ ನ್ಯಾಯ ಒದಗಿಸುವ ಎಷ್ಟೋ ವಿಷಯಗಳನ್ನು, ಸಾವಿರಾರು ಪಾತ್ರಗಳನ್ನು ಸನ್ನಿವೇಶಗಳನ್ನು ಕಥನದ ತೆಕ್ಕೆಗೆ ತಂದರು. ದಾಸ ಸಾಹಿತ್ಯ, ವಚನ ಸಾಹಿತ್ಯ, ಶಾಸ್ತ್ರ, ಪುರಾಣ ವೇದ ವೇದಾಂಗಗಳ ಕುರಿತ ಚರ್ಚೆ ಲಲಿತ ಸಾಹಿತ್ಯದಲ್ಲಿ ತಂದರು. ಕೃಷ್ಣರಾಯರ ಕಥನ ಸಾಹಿತ್ಯ ಕೇವಲ ಕಥೆಯನ್ನಷ್ಟೇ ಹೇಳುವುದಿಲ್ಲ. ಅದರಲ್ಲಿ ಅವರು ನಾಡು ನುಡಿಯ ಪ್ರೀತಿ, ಅಭಿಮಾನ, ಸಂಘರ್ಷ ಸಂವೇದನೆಗಳನ್ನು ತುಂಬಿದ್ದಾರೆ. ಕನ್ನಡಿಗರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಪ್ರಗತೀಶೀಲ ಮನೋಭಾವವನ್ನು ಸಮೀಕರಿಸಿ ಗದ್ಯಕ್ಕೆ ಕಾವ್ಯದ ಸೊಗಸು ಬೆರೆಯಿಸಿ ಕನ್ನಡ ಕಟ್ಟಿದವರೊಬ್ಬರಾದರು.










Be the first to review “ಗೃಹಲಕ್ಷ್ಮಿ, ರುಕ್ಮಿಣಿ ಮತ್ತು ತಾಯಿ ಮಕ್ಕಳು / Gruhalakshmi, Rukmini Mattu Thayi Makkalu”