ಪ್ರಕಾಶನ : ಸಾಹಿತ್ಯ ನಂದನ
ಯೌವನ ಒಂದು ಹುಚ್ಚು ಮಹಾಪೂರ. ಬದುಕಿನಲ್ಲಿ ಒಂದು ಮಹತ್ತರ ತಿರುವು. ಕೆಲವರು ಈಜಿ ದಡ ಸೇರುತ್ತಾರೆ. ಕೆಲವರು ಕೊಚ್ಚಿಹೋಗುತ್ತಾರೆ, ಕೆಲವರು ಮುಳುಗುತ್ತಾರೆ. ಬದುಕಿನ ಈ ಮಹತ್ತರ ತಿರುವಿನಲ್ಲಿ ಬಲೆ ಬೀಸಿದರೆ ಬಲೆಯಲ್ಲಿ ಸಿಕ್ಕಿಬೀಳುವವರೆಷ್ಟು ಮಂದಿಯೋ! ಆಗ ಯುವ ಜನಾಂಗಕ್ಕೆ ಬೇಕಾಗುವುದು ಪ್ರೀತಿ, ವಿಶ್ವಾಸ, ಭರವಸೆ, ಅವರನ್ನು ಅರ್ಥೈಸಿಕೊಂಡು ಮಾರ್ಗದರ್ಶನ ನೀಡಿ ಮುಂದೆ ಸಾಗಲು ದಾರಿ ಹಸನು ಮಾಡಿಕೊಡುವ ಹಿತೈಷಿಗಳು. ಇವುಗಳು ಲಭ್ಯವಾಗದೇ ಹೋದಲ್ಲಿ ಬದುಕು ದುಸ್ಸಹವಾಗಿ ಪ್ರಪಾತದಲ್ಲಿ ಬಿದ್ದುಹೋಗಬಹುದು. ಯೌವನದಲ್ಲಿ ನಡೆಯಬಹುದಾದ, ನಡೆಯುವ ನಡೆದಿರುವ ಒಂದು ಘಟನೆಯ ಸುತ್ತ ಹೆಣೆದಿರುವ ಕಥೆಯಿದು.










Be the first to review “ಬಯಕೆಯ ಬಲೆಯಲ್ಲಿ / Bayakeya Baleyalli”