ಪ್ರಕಾಶನ :ಹೇಮಂತ ಸಾಹಿತ್ಯ
ಹಿರಿಯರೊಬ್ಬರು ಹೇಳಿದ, ಶ್ರೀಚಕ್ರೋಪಾಸಕರ ಜೀವನದ ಘಟನೆಯನ್ನು ಅವಲಂಬಿಸಿ, ಹೆಣೆದ ಕಾದಂಬರಿ ‘ಶ್ರೀಚಕ್ರೇಶ್ವರಿ’. ಆ ಘಟನೆಯ ಸುತ್ತ ಶ್ರೀಚಕ್ರೋಪಾಸನೆ, ಉಪಾಸಕರ ಬಗ್ಗೆ ಕೇಳಿದ ಬೇರೆ ಬೇರೆ ಪ್ರಸಂಗಗಳನ್ನು ಬೆರೆಯಿಸಿ, ಜೊತೆಗೆ ಅಷ್ಟಿಷ್ಟು ನನ್ನ ಕಲ್ಪನೆಯನ್ನು ಕಲೆಹಾಕಿ ಈ ಕಾದಂಬರಿಯನ್ನು ನೆಯ್ದಿದ್ದೇನೆ. ನನ್ನಿಂದ ಈ ಕಾದಂಬರಿಯ ವಸ್ತುವನ್ನು ಕೇಳಿದ ವಿಜ್ಞಾನ ಮಿತ್ರರೊಬ್ಬರು ‘ಮಾನವ ಚಂದ್ರಲೋಕದಲ್ಲಿ ಕಾಲಿಟ್ಟು ಹಳೆಯ ನಂಬಿಕೆಗಳೆಲ್ಲಾ ಬುಡಮೇಲಾಗಿ ಕಾಡುಪಾಲಾದ ಕಾಲದಲ್ಲಿ ನೀವು ಇಂಥ ಅಡಗೂಲಜ್ಜಿ ಕಥೆಯನ್ನು ಬರೆಯಬೇಕೆ? ಎಂದು ಕೇಳಿದರು.
ಅದು ಅಂತಿರಲಿ, ವಿಜ್ಞಾನದ ಬಗ್ಗೆ ಅಜ್ಞಾನವಾಗಲಿ, ಅಸಡ್ಡೆಯಾಗಲಿ ಇಲ್ಲ. ನನ್ನಿಂದ ಆದಷ್ಟುಮಟ್ಟಿಗೆ ವಿಜ್ಞಾನದ ಸಾಧನೆಗಳನ್ನು ಅರ್ಥಮಾಡಿಕೊಂಡಿದ್ದೇನೆ. ಆದರೆ ವಿಜ್ಞಾನವೇ ಪರಮಸತ್ಯ ಎಂಬ ಶ್ರದ್ಧೆ ನನ್ನಲ್ಲಿನ್ನೂ ಮೂಡಿಲ್ಲ.










Be the first to review “ಶ್ರೀ ಚಕ್ರೇಶ್ವರಿ / Sri Chakreshwari”