ಪ್ರಕಾಶನ : ಸಾಹಿತ್ಯ ನಂದನ
ಒಳ್ಳೇ ಮಕ್ಕಳು ಹುಟ್ಟಬೇಕಾದರೆ ಒಳ್ಳೆ ತಂದೆತಾಯಿಗಳಿಗೆ ಹುಟ್ಟಬೇಕಾಗುವುದು ನಿಜ. ವಿರಸ ದಾಂಪತ್ಯದ ಅನೈತಿಕ ಸಂಬಂಧದ ಮಕ್ಕಳು ಬೆಳೆಯುವ ಪರಿಸರ, ಆ ಮಕ್ಕಳ ಸಮಸ್ಯೆಗಳೇ ಬೇರೆ. ಕರುಣ ವಿವಾಹಪೂರ್ವದ ಅನೈತಿಕ ಸಂಬಂಧದಿಂದ ಜನಿಸಿದರೂ ಅವಳನ್ನ ತಮ್ಮ ಮಗಳೆಂದೇ ಪ್ರೀತಿ ಆದರದಿಂದ ಸಾಕಿದ ಜಾನಕಿ ಸುಬ್ರಹ್ಮಣ್ಯಂ ಅವಳಿಗಾಗಿ ಏನು ಮಾಡಲೂ ಸಿದ್ಧರಿದ್ದರು. ಆದರೆ ಅವಳ ನಿಜವಾದ ತಂದೆ ಭಾಸ್ಕರ ತನ್ನ ಪ್ರೇಯಸಿಯ ನೆನಪಿನ ಕುಡಿಯನ್ನು ತನ್ನೊಂದಿಗೆ ತನ್ನದೇ ಆದ ಮಕ್ಕಳೊಂದಿಗೆ ಬೆಳೆಸಿ ತಾನು ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪಪಟ್ಟಾಗ ಪ್ರೇಯಸಿಯ ಪುತ್ರಿ ಕರುಣಾಳನ್ನು ಪತ್ನಿ ಶೈಲಜ ಒಪ್ಪುವಳೆ? ಕೊನೆಗೆ ಕರುಣಾ ತನ್ನ ನಿಜವಾದ ತಂದೆಯನ್ನು ಒಪ್ಪುವಳೇ? ಇದೇ ಈ ಕಾದಂಬರಿಯ ಜೀವಾಳ.











Be the first to review “ಕರುಣಾಳು ಬಾ ಬೆಳಕೆ / Karunalu Ba Belake”