ಪ್ರಕಾಶನ : ಹೇಮಂತ ಸಾಹಿತ್ಯ
ಕಾದಂಬರಿಯ ಜೀವನಾಡಿ ವಸ್ತು ಹಾಗೂ ಪಾತ್ರಗಳು; ಉಳಿದೆಲ್ಲವೂ ಗೌಣ. ಮನೋವಿಜ್ಞಾನ ವಿಶ್ಲೇಷಣೂ ಕಥೆಯ ಚೌಕಟ್ಟಿನಲ್ಲಿ ಅಡಕವಾಗಬೇಕು. ಆ ವಿಶ್ಲೇಷಣವನ್ನು ತೆಗೆದುಹಾಕಿದರೆ ಕಥೆಯ ಅಸ್ತಿಭಾರವೇ ಕುಸಿದುಬೀಳುತ್ತದೆ ಎನ್ನುವಷ್ಟು ವಸ್ತು ಪುಷ್ಟವಾಗಿರಬೇಕು. ಜಮುನಾ, ಇಂದಿರಾ, ಪ್ರಭಾಕರ, ಮೋಹನ, ಮಾರ್ಗರೆಟ್, ರಂಗನಾಯಕಮ್ಮ, ಉಮಾಬಾಯಿ ಇವರೆಲ್ಲರ ಮನೋವಿಶ್ಲೇಷಣೆ ಈ ಕಾದಂಬರಿಯಲ್ಲಿ ಬಂದಿದೆ. ಉಪನ್ಯಾಸ ರೂಪದಲ್ಲಲ್ಲ; ಕಥಾವಸ್ತು ರೂಪದಲ್ಲಿ.
‘ಗರುಡಮಚ್ಚೆ’ ಒಬ್ಬ ಹಾವಾಡಿಗ ಅವನ ಮಗನನ್ನು ಅವಲಂಬಿಸಿದ ಕಥೆ. ನೆರಳನ್ನು ನೀಡಿದ ವೃಕ್ಷವನ್ನು ಕಡಿದು ಮರೀಚಿಕೆಯನ್ನರಸುತ್ತ ಹೋದ ಒಬ್ಬ ನಿರ್ಭಾಗ್ಯನ ಜೀವನ ಸಮರವೇ ಇದರ ಕಥಾವಸ್ತು.











Be the first to review “ಕಾಗದದ ಹೂ,ಗರುಡಮಚ್ಚೆ ಮತ್ತು ಏಣಾಕ್ಷಿ / Kagadada Hu, Garudamachhe Mattu Yenakshi”